ಪೀಠಿಕೆ

ಆತ್ಮೀಯ ಪ್ರಯಾಣಿಕರೇ,

ನಿಮ್ಮ ಸ್ಥಳೀಯ ಸಾರಿಗೆ ಸಂಸ್ಥೆ, ಬೆಂಗಳೂರು ಮೆಟ್ರೋ ರೈಲು ನಿಗಮವು, ಮೆಟ್ರೋ ಸೇವೆಯ ಬಗ್ಗೆ ನಿಮ್ಮ ಅನಿಸಿಕೆ- ಅಭಿಪ್ರಾಯಗಳನ್ನು ತಿಳಿಯಲು ಬಯಸುತ್ತದೆ. (ಉದಾ: ಮೆಟ್ರೋ ಬಗೆಗಿನ ಮಾಹಿತಿ ಸುಲಭವಾಗಿ ಸಿಗುತ್ತಿದೆಯೇ?? ರೈಲುಗಳ ನಡುವಿನ ಸಮಯದ ಅ೦ತರ ಸಮಾಧಾನಕರವೇ? ಮೆಟ್ರೊ ಟಿಕೆಟ್ ಖರೀದಿ- ಪಾವತಿ ಸುಲಭವೇ? ರೈಲುಗಳು ಹಾಗೂ ನಿಲ್ದಾಣಗಳು ಸ್ವಚ್ಛ ಹಾಗೂ ಆರಾಮದಾಯಕವಾಗಿವೆಯೇ?

ಮೆಟ್ರೊ ಸೇವೆಯನ್ನು ನಿರ೦ತರವಾಗಿ, ಯಾವಾಗಲೋ ಒಮ್ಮೆ ಅಥವಾ ಬಹು ವಿರಳವಾಗಿ ಬಳಸುವವರಾಗಿದ್ದರೂ ಕೂಡ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಯುವ ಆಸಕ್ತಿ ನಮಗಿದೆ..

ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ೩ ರಿ೦ದ ೫ ನಿಮಿಷ ಸಾಕು. ಇಲ್ಲಿ ನೀಡಲಾಗಿರುವ ಹೇಳಿಕೆಗಳಿಗೆ ನಿಮಗೆ  ಸೂಕ್ತವೆನಿಸುವ ಆಯ್ಕೆಗಳನ್ನು ಆರಿಸಿ ಕ್ಲಿಕ್ ಮಾಡುವ ಮೂಲಕ ಪ್ರತಿಕ್ರಿಯಿಸಿ.

ಈ ಸಮೀಕ್ಷೆಯಲ್ಲಿ ಪ್ರಪ೦ಚದ ಅನೇಕ ಮೆಟ್ರೋಗಳು ಏಕಕಾಲದಲ್ಲಿ ಭಾಗವಹಿಸುತ್ತಿವೆ. ಇದರಿ೦ದಾಗಿ, ಮೆಟ್ರೊ ಸೇವೆಯ ಕುರಿತಾಗಿ ಪ್ರಯಾಣಿಕರ ಆಲೋಚನೆಯನ್ನು ತಿಳಿಯಬಹುದಾಗಿದೆ. ಆನ೦ತರ, ಇದರ ಫಲಿತಾ೦ಶದ ಹೋಲಿಕೆಯ ಮೇರೆಗೆ, ಪರಸ್ಪರ ಕಲಿಕೆ, ಬೆಳವಣಿಗೆ ಹಾಗೂ ಗುಣಮಟ್ಟದ ಸೇವೆ ಒದಗಿಸುವುದು ನಮ್ಮ ಉದ್ಧೇಶವಾಗಿದೆ.

ನಿಮ್ಮ ಮಾಹಿತಿ ಹಾಗೂ ಪ್ರತಿಕ್ರಿಯೆಯನ್ನು ಗೌಪ್ಯವಾಗಿಡಲಾಗುವುದು ಹಾಗೂ ಬೇರೆ ಯಾವುದೇ ಉದ್ಧೇಶಗಳಿಗೆ ಬಳಸಲಾಗುವುದಿಲ್ಲ.

ನಮ್ಮ ಸಮೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

ಇ೦ತಿ,
ತಮ್ಮ ವಿಶ್ವಾಸಿ,
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ

T